1.

 

post

ಚೆಂದದೊಳ್ ಅರ್ಥದಂದವ ಹುಡುಕಿ.    |15|

ತಿಳಿಗೊಳ್ಳದ ಚೆಂದರ್ಥದ ಗೊಡವಿ.      |15|

ಚೆಂದಾವ ಚೆಂದ ಅದೆಂತಾವ ಚೆಂದ.      |16|

ಅರ್ಥದ ಅಂದ ತಿಳಿಗೊಳ್ಳದ ಚೆಂದ.       |16|

ಪತ್ತಾರ ಚಿತ್ತಾರ ನಗುಮೂಗಿನ ಚಿತ್ತಾರ.    |17|

ನವಿಲಿನ ಕಿಲಿಕಿಲಿ ಕುಣಿನಡುವ ಕಿಲಿಕಿಲಿ.  |17|

ಮಿನಮಿನ ನಕ್ಷತ್ರ ಜುಳುಜುಳು ನದಿಸದ್ದು|18|

ಬಂಗಾರ ರವಿದುಂಡ  ನಿಧಿ ನೀರು ರಂಗು |18|

ಹೇಳಿಹರು ದೊಡ್ಡವರು ಶೂನ್ಯ ಚೆಂದ.    |17|

ಶೂನ್ಯದೊಳ್ ಲೀನ ಚೆಂದ ಅದರರ್ಥ.   |17|

    —  ಈಅಂಶ