ನೀರ ಒರತಿ

ಹಳ್ಳ ಹೀರಿ ಕಾರಂಜಿ ಹರವಿ

ಬ್ಯಾಸಗಿ ಉಸುಗ ನೀರ ಒರತಿ

ಕೊಡವ ತುಂಬಿ ನೀರಡಕಿ ಹಿಂಗಿ

ತುಸು ಸೂಸ್ಯತ ತಂಪ ಗಾಳಿ

ಚಿಲುಮೆ ಚೆಲುವು ಮರಚಿಕೆ ಹಳ್ಳದಿ

ಒರತಿ ನೀರು ತುಂಬೆಲ್ಲಾ ಪೂರತಿ

ಹಸಿರಾತು ಅಲ್ಲಲ್ಲಿ ಇಲ್ಲ ಕೊರತಿ

ಊರ ಚೆಲುವಿಗೆ ನಿನ್ನದೆ ಕಿರುತಿ

ನಮ್ಮ ಸಲುಹಿ ಸಲುವಾಗಿ ತವರಿನಲಿ

ನೀ ಕರುಳ ಗಂಗಿ ಉಳಿದಿ

ಒಡೊಡಿ ಹೊಳೆಯ ಸೇರಲಿಲ್ಲ ನೀ

ತಿಳಿತಿಳಿದು ನಿನ್ನವ ಸಾಗರನ ತೊರೆದಿ

ತರತರದಿ ಸೀರೆ ಗರತಿಯರು ಪೂಜಿಸಿ

ನೀರ ಒಡತಿ ನಿನಗಾರತಿ ಬೆಳಗಿ

ಎಲೆಕಾಯಿ ಎಡೆ ಒಪ್ಪಿಸಿ

ವರುಷಹರುಷದಲಿ ಕೈಯಿಂದ ನಮಿಸಿ

ನೀ, ಒರತಿ ನೀರ ತರಾಕ ಬರತಿ?!

ನಿಮ್ಮ ಟಿಪ್ಪಣಿ ಬರೆಯಿರಿ