।।ಭಂಡ ನನ ಗಂಡ।।
ಕಟ್ಟೀ ಮಂದ್ಯಾಗ ಕುಂತ
ಯಾಕ ಕಲಬೆರಕಿ ಮಾತು ನಿಂಗ
ತಿಳಿ ತಿಳಿಯದ್ದೆಲ್ಲಾ ಒದರೊದರಿ
ಬಾಯಿ ಬಡಿಸಿ ಹೊಡಿಸಿಕೊಂಡಿ
ಸೊಂಟದಾ ಅಳತಿ ರೆಟ್ಟಿ ಐತಿ
ಧೈರ್ಯಕ್ಕ ಕಮ್ಮಿ ಐತಿ
ಮುಂದಕ್ಕ ಹೋಗಲಾಕ ನಿಂದ
ಕಾಲ ಎಳದೆಳದು ಇಟ್ಟಿ ಸತ್ತಿ
ಬಾನೆತ್ತರಕ ಹಾರ್ ಹೋದ ಚಿತ್ತ
ಕನಸ ಮೆತ್ತಿ ಗಂಟಿನು ಕಟ್ಟಿ
ಕೆಳಕಕಿಳಿತು ಜಾರಿ ಸವನ
ಮರುವೋ ಎಲ್ಲಾ ನಿಂದು
ಮರ ಜಿಗಿತದಾಟ ನೋಡಾ||